ಕನ್ನಡ ಭಾಷೆ: ನಮ್ಮ ಹೆಮ್ಮೆ

ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡದಿಂದಲೇ ಮಾತ್ರ ಸಾದ್ಯ! ಹಾಗೆ ಪ್ರತಿಯೊಂದು ರಾಜ್ಯದ ಜನರು ತಮ್ಮ ಮಾತೃ ಭಾಷೆಗಳನ್ನೇ ಸಾಧನವಾಗಿ ಬಳಸಿದ್ದಲ್ಲಿ ಮಾತ್ರ ಭಾರತದ ಅಭಿವೃದ್ದಿ. ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರೇ ಹೇಳುವಂತೆ " ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ."
ಎಸ್ಟು ಸತ್ಯವಿದೆ ಅಲ್ವೇ?

ಆದ್ರೆ ನಮ್ಮ ಗ್ರಹಚಾರ ಮತ್ತು ತಮಾಷೆ ನೋಡಿ.
 ಶಾಲೆಗಳಲ್ಲಿ ಇಂದಿಗೂ, ಹಿಂದೀ, ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಮಾಹಿತಿಯನ್ನ ಮಕ್ಕಳ ತಲೇಲಿ "ರಾಷ್ಟ್ರೀಯತೆ"ಯ ನೆಪ ಹೊಡ್ಡಿ ತುರುಕ್ತಾನೇ ಇದ್ದಾರೆ.ಇದರಿಂದ ತಮ್ಮ ಭಾಷೆಯನ್ನ ಮಾತ್ನಾಡೊದೆ ಕೀಳು ಎಂಬೋ ಸಂಕುಚಿತ ಮನೋಭಾವನೆ ಬೆಳಿತ ಇರೋದಂತೂ ಸತ್ಯ.