ಜೀವ ಸೃಷ್ಟಿಯಾ ನಿಜ ಕತೆಯನ್ನು ಮುಂದುವರಿಸುತ್ತಾ...
ವಿವಿಧತೆಗೆ ಕಾರಣವೇನು?

adenine, guanine, thaimine ಮತ್ತು cytosine ಎಂಬ ನಾಲ್ಕು ರಾಸಾಯನಿಕ ಕಣಗಳ (nucleotides) ವಿವಿಧ ಜೋಡಣೆಯ ರೂಪವಾದ DNA, ಪ್ರಪಂಚದ ಮೇಲಿರುವ ಎಲ್ಲ ಜೀವ ಸಂಕುಲದ ಅಗಾಧ ವಿವಿಧತೆಗೆ ಕಾರಣವೆಂಬುದನ್ನು ನಂಬಲಸಾದ್ಯವಾದರು ನಿಜ. ಈ ನಾಲ್ಕು nucleotides ಗಳ ಜೋಡಣೆಯಲ್ಲಿ ಉಂಟಾಗುವ ಏರು-ಪೇರುಗಳು ಒಂದು ಕೋಶದ (single celled) ಜೀವಿಗಳಾದ ಬ್ಯಾಕ್ಟೀರಿಯದಿಂದ ಪ್ರಾರಂಭವಾಗಿ ಅತೀ ಸಂಕೀರ್ಣ ಮಾನವ ಜೀವಿಗಳ ರಚನೆಗೆ ತಳಹದಿ!

ವಿಕಾಸವಾದದ ಬೇರಾದ ಈ ಪರಿಷ್ಕರಣೆಯನ್ನು ಸಮರ್ಥಿಸುವಲ್ಲಿ ನಮ್ಮ ತೀರ ಹತ್ತಿರ ಸಂಬಧಿಗಳಾದ ಚಿಂಪಾಂಜಿಯಾ DNA ರಚನೆ ತುಂಬ ಸಹಕಾರಿಯಾಗಿದೆ. ಈ ರಚನೆ ಶೇಕಡ ೯೯ ರಸ್ಟು ಮಾನವ DNA ಗೆ ಸಮನಾಗಿರುವುದು ಅಚ್ಚರಿ ಹಾಗು ಕುತೂಹಲವನ್ನು ಕೆರಳಿಸುತ್ತದೆ.
2 comments:
ಆತ್ಮೀಯ ಬ್ಲಾಗೇಶ್ವರಾ,
ಒಳ್ಳೆ ಕೆಲಸಕ್ಕೆ ಕೈ ಹಾಕಿದ್ದೀರಿ, ಒಳಿತಾಗಲಿ. ಒಂದೆರಡು “ಅಕ್ಕಿಯಿಂದ ಕಲ್ಲು ಆಯುವ” ಕೆಲಸ.
೧. ವ್ಯಕ್ಯಾನ ಅಲ್ಲ, ವ್ಯಾಖ್ಯಾನ
೨. ಹೇಳಿಗೆ ಅಲ್ಲ, ಏಳಿಗೆ
೩. ತಿಮಿನ್ಗಿಲ ಸೊನ್ನೆಯನ್ನೇ ನುಂಗಿಬಿಟ್ಟಿದೆ, ತಿಮಿಂಗಿಲ (timiMgila) ಹೆಚ್ಚು ಬಳಕೆಯಲ್ಲಿದೆ. [ಹಾಗೆಯೇ, ಸ್ವಯಮ್ ತಪ್ಪಲ್ಲ, ಸ್ವಯಂ (svayaM)]
ಇವುಗಳನ್ನೆಲ್ಲ ಉತ್ತೇಜನವೆಂದೇ ಪರಿಗಣಿಸಬೇಕೆಂಬ ಆಶಯದೊಂದಿಗೆ,
ಹರಹರಾ ಶ್ರೀ ಚನ್ನ ಬ್ಲಾಗೇಶ್ವರಾ !
ರಘು
ಆತ್ಮೀಯ ರಘು,
ನಿನ್ನೀ "ಕಲ್ಲು ಆಯುವ ಕೆಲಸ" ಹೀಗೆಯೇ ಮುಂದುವರಿಯಲಿ.
ಬರಹವನ್ನ ಚಂದಗೊಳಿಸಿದ್ದಕ್ಕೆ ನಮನಗಳು!
Post a Comment